    ಮೂಲದೊಡನೆ ಪರಿಶೀಲಿಸಿ

ಎಂಥಾಲ್ಪಿ
	ಕ್ರಿಯೋದ್ಯುಕ್ತ ಮಂಡಲದ ಉಷ್ಣಪಿಡಿ (ಹೀಟ್ ಕಂಟೆಂಟ್) ಯಾವುದೇ ವ್ಯವಸ್ಥೆಯಲ್ಲಿ (ಎಂದರೆ ವಿವೇಚನೆಯಲ್ಲಿರುವ ಆಕಾಶಭಾಗ) ಅದರ ಆಂತರಿಕ ಶಕ್ತಿ (U)  ಹಾಗೂ ವ್ಯವಸ್ಥೆಯ ಘನಗಾತ್ರ (ಗಿ) ಮತ್ತು ಪರಿಸರಗಳು ಅದರ ಮೇಲೆ ಪ್ರಯುಕ್ತಿಸುವ ಒತ್ತಡದ (P) ಗುಣಲಬ್ಧದ ಮೊತ್ತ (ಎಂಥಾಲ್ಪಿ ಊ=U+ಗಿP). ಈ ಶಬ್ದದ ಅರ್ಥ ಒಟ್ಟು ಉಷ್ಣಪರಿಮಾಣ. ಪ್ರತಿವ್ಯವಸ್ಥೆಯೂ ತನ್ನಲ್ಲಿನ ವಸ್ತುರಚನೆ ಮತ್ತು ವಿತರಣೆಯ ನಿಮಿತ್ತ ಪಡೆದಿರುವ ಶಕ್ತಿಯೇ ಇದರ ಆಂತರಿಕ ಶಕ್ತಿ. ಇದು ಇಲ್ಲವಾಗಿದ್ದರೆ ದ್ರವವೊಂದು ಘನವಸ್ತುವಾಗಿ ಹೆಪ್ಪುಗಟ್ಟುವಾಗ ಉಷ್ಣವನ್ನೊದಗಿಸಲಾರದು. ವೋಲ್ಟನ ಕೋಶದಲ್ಲಿ ಸಂಯುಕ್ತವೊಂದರ ರಾಸಾಯನಿಕ ವಿಭಜನೆಯಿಂದ ವಿದ್ಯುಚ್ಫಕ್ತಿ ಒದಗಲಾರದು. ಆಂತರಿಕ ಶಕ್ತಿಯ ಸಂಕೇತ U.  ವ್ಯವಸ್ಥೆಯ ಚರಗಳಾಗಿರುವ P, ಗಿ, ಖಿ ಗಳನ್ನು U ಒಳಗೊಂಡಿದೆ. ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ ಎರಡು ಚರಗಳನ್ನು ಹೊಂದಿರಬಹುದಾದ ಉತ್ಪನ್ನವೇ ಆಂತರಿಕ ಶಕ್ತಿ. U=ಜಿ1(P,ಖಿ) ಇಲ್ಲವೇ U=ಜಿ2(ಖಿ,ಗಿ) ಇಲ್ಲವೇ U=ಜಿ3(ಗಿ,P) ಎಂದು ಬರೆಯಬಹುದು. ಮುಖ್ಯವಾಗಿ ಒಂದು ವ್ಯವಸ್ಥೆಯ ವಿಶಿಷ್ಟ ರೀತಿಯಲ್ಲಿ ವಿಶಿಷ್ಟ ಬೆಲೆಯುಳ್ಳ ಅಧೀನಚರ ಎಂದು ಭಾವಿಸಬೇಕು. ಇಂಥ ಆಂತರಿಕ ಶಕ್ತಿಯೊಡನೆ ಮೇಲಣ ಪರಿಸರಗಳ ಒತ್ತಡ ಮತ್ತು ವ್ಯವಸ್ಥೆಯ ಘನಗಾತ್ರಗಳ ಗುಣಲಬ್ಧವೂ ಭೌತಕಾರ್ಯ ಇಲ್ಲವೆ ಶಕ್ತಿಯ ಅವಯವಗಳನ್ನೂ ಪಡೆದಿರುವ ಕಾರಣ ಇವನ್ನು ಸೇರಿಸಿ U+Pಗಿ ಎಂಬ ಒಟ್ಟು ಶಕ್ತಿಯನ್ನೇ ಉಷ್ಣದ ರೂಪದಲ್ಲಿ ಬರೆದಾಗ ಇದು ಎಂಥಾಲ್ಪಿ ಊ ಎನಿಸುತ್ತದೆ. ಊ=U+Pಗಿ. ಇದು ಈ ವ್ಯವಸ್ಥೆಯ ಪೂರ್ತಿ ಉಷ್ಣಪರಿಮಾಣವೂ ಆಗಿದೆ ಎಂಬುದು ಸ್ಪಷ್ಟವಾಗಿದೆ. ಅವಕಲನಗಳನ್ನು ಬರೆದಾಗ ಇದು ಜಊ=ಜU+Pಜಗಿ+ಗಿಜP ಎಂದಾಗುವುದು.

	ಒತ್ತಡ ಸ್ಥಿರವಿದ್ದು, ಇಲ್ಲವೇ ಘನಗಾತ್ರ ಸ್ಥಿರವಿದ್ದು ಈ ವ್ಯವಸ್ಥೆಯಲ್ಲಿ ಬದಲಾವಣೆಗಳು ಜರುಗುವ ಸಾಧ್ಯತೆ ಇದೆಯಷ್ಟೆ. ಘನಗಾತ್ರ ಸ್ಥಿರವಾಗಿದ್ದಲ್ಲಿ ಯಾವ ಭೌತಕಾರ್ಯಕ್ಕೂ ಅವಕಾಶವಿಲ್ಲ. ಒತ್ತಡ ಸ್ಥಿರವಾಗಿದ್ದಲ್ಲಿ ಭೌತಕಾರ್ಯ Pಜಗಿ ಮತ್ತು ಜಊ=ಜU+Pಜಗಿ. ಈ ಸಂದರ್ಭದಲ್ಲಿ ಉಷ್ಣಗತಿಶಾಸ್ತ್ರದ ಮೊದಲನೆಯ ನಿಯಮದ ಪ್ರಕಾರ ವ್ಯವಸ್ಥೆಗೆ ಒದಗಿಸಿದ ಉಷ್ಣ ಜಕಿ=ಜU+ಭೌತಕಾರ್ಯ ಎಂದಿರುವ ನಿಮಿತ್ತ ಒತ್ತಡ ಸ್ಥಿರವಾಗಿದ್ದಾಗ ಜಕಿ=ಜಊ ಇಲ್ಲವೆ ವ್ಯವಸ್ಥೆಯ ಉಷ್ಣಪರಿಮಾಣ ಅವಶ್ಯವಾಗಿಯೂ ಅದು ಹೇರಿಕೊಂಡ ಉಷ್ಣವೇ ಎಂಬುದು ಸ್ಪಷ್ಟವಾಗುತ್ತದೆ.

	ಆದರ್ಶ ಅನಿಲಗಳ ಎಂಥಾಲ್ಪಿ: ಆದರ್ಶ ಅನಿಲವೊಂದನ್ನು ಅದರ ಮೂಲ ಗಾತ್ರದಿಂದ ಹೆಚ್ಚಿನ ಗಾತ್ರಕ್ಕೆ ವಿಕಸಿಸಲು ಬಿಟ್ಟಾಗ, ಅದರ ಉಷ್ಣತೆಯಲ್ಲಿ ಬದಲಾವಣೆಯೇನೂ ಕಂಡುಬರುವುದಿಲ್ಲ. ಮುಖ್ಯವಾಗಿ ಹೆಚ್ಚಿನ ಗಾತ್ರದಲ್ಲಿ ಒತ್ತಡ ಶೂನ್ಯವಾಗಿದ್ದರೆ P=0 ಇದ್ದು ಭೌತಕಾರ್ಯ ಶೂನ್ಯವೇ. ಜಕಿ, ಜW ಇವೆರಡೂ ಶೂನ್ಯವಾಗಿರುವ ಕಾರಣ ಜU=0. ಅಂದರೆ ಆಂತರಿಕ ಶಕ್ತಿ ಶೂನ್ಯ. ಅಲ್ಲದೆ 
 ಆಗಲಿ  ಆಗಲಿ ಅವಶ್ಯವಾಗಿಯೂ
ಶೂನ್ಯ ಬೆಲೆಯವು. ಈಗ ಉಷ್ಣಪರಿಮಾಣ U+Pಗಿ ಆಗಿರುವುದರಿಂದ
	
ಆದರ್ಶ ಅನಿಲಗಳಿಗೆಲ್ಲ ಸ್ಥಿರ ಉಷ್ಣತೆಯ ಸನ್ನಿವೇಶದಲ್ಲಿ Pಗಿ=ಸ್ಥಿರ.
 ಮತ್ತು 
ಅಂದರೆ ಉಷ್ಣಪರಿಮಾಣ ಕೂಡ ಆಂತರಿಕ ಶಕ್ತಿಯಂತೆಯೇ ಆದರ್ಶ ಅನಿಲಗಳಲ್ಲೆಲ್ಲ ಒತ್ತಡ ಮತ್ತು ಘನಗಾತ್ರಗಳನ್ನು ಹೊಂದಿರುವುದಿಲ್ಲ.
	ಇದೇ ಅಲ್ಲದೆ ಇನ್ನೆರಡು ವಿಚಾರಗಳೂ ಅನುಮಿತವಾಗುತ್ತವೆ. ಉಷ್ಣತೆಗೆ ಸಂಬಂಧಿಸಿ ಆಂತರಿಕ ಶಕ್ತಿಯ ಪಾಶ್ರ್ವಿಕ ಅವಕಲನ ಅನಿಲದ ಒಂದು (ಘನಗಾತ್ರ ಸ್ಥಿರವಿರುವ) ವಿಶಿಷ್ಟ ಉಷ್ಣವಾದರೆ ಉಷ್ಣತೆಗೆ ಸಂಬಂಧಿಸಿದ ಎಂಥಾಲ್ಪಿಯ ಪಾಶ್ರ್ವಿಕ ಅವಕಲನ ಅದರ ಒತ್ತಡ ಸ್ಥಿರವಾಗಿರುವಾಗಿನ ವಿಶಿಷ್ಟ ಉಷ್ಣ.
		
ಇದೇ ಅಲ್ಲದೆ ವ್ಯವಸ್ಥೆಯೊಂದು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಬದಲಾವಣೆಗೊಂಡಾಗ ಆಂತರಿಕಶಕ್ತಿ ಮತ್ತು ಎಂಥಾಲ್ಪಿಗಳೆರಡೂ ಬದಲಾವಣೆಗೊಳ್ಳುವುವು. ಇಂಥ ಬದಲಾವಣೆಯ ಅಂಶಗಳು ಅಠಿ ಮತ್ತು ಅv ಗಳ ಬದಲಾವಣೆಗಳನ್ನೂ ಹೊಂದಿವೆ.
ರಾಸಾಯನಿಕ ಕ್ರಿಯೆಗಳಲ್ಲಿ ಉಷ್ಣಪರಿಮಾಣ: ಹೆಚ್ಚಿನ ರಾಸಾಯನಿಕ ಕ್ರಿಯೆಗಳು ನಿಶ್ಚಿತ ಒತ್ತಡದಲ್ಲಿ (ಎಂದರೆ ಒತ್ತಡ ಸ್ಥಿರವಾಗಿರುವಾಗ) ಜರುಗುವಂಥವು. ಇನ್ನು ಮುಚ್ಚಿದ ಪಾತ್ರೆಯೊಳಗೆ ನಡೆಸುವ ರಾಸಾಯನಿಕ ಕ್ರಿಯೆಗಳು ನಿಶ್ಚಿತ ಘನಗಾತ್ರಗಳಲ್ಲಿ ಜರುಗುವ ಕಾರ್ಯಗಳು. ಹೀಗೆ ಇವೆರಡು ಸಂದರ್ಭಗಳಲ್ಲಿ ಲಭಿಸುವ ಉಷ್ಣ ಪರಿಮಾಣಗಳನ್ನು ಕಿಠಿ ಮತ್ತು ಕಿv ಗಳೆಂದು ಬರೆಯುತ್ತಾರೆ.
ಕಿಠಿ=(ಫಲಿತ ಉಷ್ಣಪರಿಮಾಣ) - (ಆರಂಭದ ಉಷ್ಣಪರಿಮಾಣ) = (Uನಲ್ಲಿ ಬದಲಾವಣೆ) ಠಿ+Pಘಿ (ಘನಗಾತ್ರದ ಬದಲಾವಣೆ); ಮತ್ತು ಕಿv= (Uನಲ್ಲಿ ಬದಲಾವಣೆ). ಅನಿಲಗಳಲ್ಲಿ Uಠಿ=Uv ಹಾಗೆಯೇ ದ್ರವಗಳಲ್ಲಿ ಮತ್ತು ಘನವಸ್ತುಗಳಲ್ಲೂ ಇವುಗಳ ವ್ಯತ್ಯಾಸ ಅತ್ಯಂತ ಕಡಿಮೆಯಾಗಿರುವ ಕಾರಣ ಇವುಗಳಲ್ಲಿನ ಬದಲಾವಣೆಗಳನ್ನು ಸಮಾನವೆಂದೇ ಗ್ರಹಿಸಲಾಗುತ್ತದೆ. ಆದ್ದರಿಂದ ಕಿಠಿ-ಕಿv=P∆ಗಿ ಎಂದೇ ಗ್ರಹಿಸುತ್ತಾರೆ. ಅಂತೂ ರಸಾಯನಶಾಸ್ತ್ರದ ಗ್ರಂಥಗಳಲ್ಲಿ ವಿವಿಧ ರಾಸಾಯನಿಕ ಕ್ರಿಯೆಗಳಲ್ಲಿನ ಉಷ್ಣಪರಿಮಾಣಗಳನ್ನು ಉಷ್ಣದ ಮಾನಗಳಲ್ಲಿ ವಿವಿಧ ಸಮೀಕರಣಗಳೊಡನೆ ಬರೆಯುವುದಿದೆ. ಉದಾಹರಣೆಗೆ ಉಷ್ಣಗ್ರಾಹಕ (ಎಂಡೋಥರ್ಮಿಕ್) ಕ್ರಿಯೆಯಲ್ಲಿ ಓ2+ಔ2→2ಓಔ-4,200 ಕೆಲೊರಿ ಎಂದು ಹೀರಲ್ಪಟ್ಟ ಉಷ್ಣವನ್ನು-4,200 ಕೆಲೊರಿಗಳಲ್ಲಿ ಬರೆದರೆ, ಉಷ್ಣಜನಕ (ಎಕ್ಸೋಥರ್ಮಿಕ್) ಕ್ರಿಯೆಗಳಲ್ಲಿ ಇದನ್ನು ಧನಚಿಹ್ನೆಯಿಂದ ಬರೆಯುತ್ತಾರೆ.
	ಊಅI+ಓಚಿಔಊ→ಓಚಿಅI+ಊ20+13,400	ಕೆಲೊರಿ
ಇನ್ನೂ ಹೆಚ್ಚಿನ ವಿವರಗಳನ್ನೊದಗಿಸುವ ಸಂದರ್ಭಗಳಲ್ಲಿ ವಿವಿಧ ರಾಸಾಯನಿಕ ವಸ್ತುಗಳು ಘನ, ದ್ರವ ಮತ್ತು ಅನಿಲಗಳ ರೂಪದಲ್ಲಿರುವುದೆಂದು ಸೂಚಿಸಿಕೊಳ್ಳಲಾಗುತ್ತದೆ: ಉದಾಹರಣೆಗೆ
	ಊ2 (ಅನಿಲ)+1/2 ಔ2 (ಅನಿಲ)→ಊ20 (ದ್ರವ) —68,300 ಕೆಲೊರಿ
ರಾಸಾಯನಿಕ ಕ್ರಿಯೆಗಳಲ್ಲಿನ ಉಷ್ಣಗಳನ್ನು ವಿವಿಧ ಸಂದರ್ಭಗಳಲ್ಲಿ ಪ್ರತ್ಯೇಕ ಹೆಸರುಗಳಿಂದ ಕರೆಯುತ್ತಾರೆ: 1. ಸಂಭವನ ಉಷ್ಣ; 2. ದಹನ ಉಷ್ಣ; 3. ರೂಪಾಂತರ ಉಷ್ಣ; 4. ವಿಲಯನ ಉಷ್ಣ; 5. ತಟಸ್ಥೀಕರಣ ಉಷ್ಣ, ಇತ್ಯಾದಿ. 
	ಸಂಭವನ ಉಷ್ಣ (ಹೀಟ್ ಆಫ್ ಫಾರ್ಮೇಶನ್): ಘಟಕ ಧಾತುಗಳಿಂದ ವಸ್ತು ಏರ್ಪಡುವಾಗ ಉಂಟಾಗುವ ಉಷ್ಣ. ಇದನ್ನು ಗ್ರಾಂಮೋಲ್‍ಗೆ ಸರಿಯಾಗಿ ಬರೆಯುತ್ತಾರೆ. ಹೈಡ್ರೊಜನ್+ಆಕ್ಸಿಜನ್→ನೀರು.
		ಊ2+ಔ→ಊ2ಔ
ಇಲ್ಲಿನ ಸಂಭವನ ಉಷ್ಣ-68.9 ಕಿಲೊ ಕೆಲೊರಿ. ಂ ಧಾತು+ ಃ ಧಾತು → ಅ ಸಂಯುಕ್ತವಸ್ತು ಸೂಚಕ. ಆಗ ಸಂಭವನ ಉಷ್ಣ =ಊಅ-ಊಂ-ಊಃ ಪ್ರತಿ ಧಾತುವಿನ ಉಷ್ಣಪರಿಮಾಣವನ್ನೂ ಶೂನ್ಯವೆಂದು ಗ್ರಹಿಸಿದರೆ ಸಂಭವನ ಉಷ್ಣ ಎಂದರೆ ಸಂಯುಕ್ತದ ಉಷ್ಣಪರಿಮಾಣ. ಇದರಿಂದ ವಿವಿಧ ಕ್ರಿಯೆಗಳಲ್ಲಿನ ಉಷ್ಣಗಳನ್ನು ಬರೆಯಬಲ್ಲೆವು.
	ದಹನ ಉಷ್ಣ (ಹೀಟ್ ಆಫ್ ಕಂಬಶ್ಚನ್): ಒಂದು ಗ್ರಾಂಮೋಲ್ ವಸ್ತು ಸಂಪೂರ್ಣ ದಹಿಸುವಾಗ ಬಿಡುಗಡೆಯಾಗುವ ಉಷ್ಣ. ಮೇಲಿನ ನಿದರ್ಶನದಲ್ಲಿ ಹೈಡ್ರೊಜನಿನ ದಹನ ಉಷ್ಣ 68.9 ಕಿಲೊ ಕೆಲೊರಿಗಳು.
	ರೂಪಾಂತರ ಉಷ್ಣ (ಹೀಟ್ ಆಫ್ ಟ್ರಾನ್ಸ್‍ಫಾರ್ಮೇಶನ್): ವಸ್ತುವೊಂದು ಕರಗುವಾಗ, ಆವಿಯಾಗುವಾಗ ಪಡೆಯುವ ಗುಪ್ತೋಷ್ಣ, ಬಹುರೂಪಗಳಲ್ಲಿರುವ (ಅಲ್ಲೊಟ್ರೊಪಿ) ವಸ್ತುವೊಂದು ಒಂದು ರೂಪದಿಂದ ಮತ್ತೊಂದು ರೂಪವನ್ನು ಪಡೆವಾಗ ಹೀರುವ ಇಲ್ಲವೆ ಬಿಡುಗಡೆಗೊಳಿಸುವ ಉಷ್ಣ ಇವೆಲ್ಲ ರೂಪಾಂತರ ಉಷ್ಣಕ್ಕೆ ನಿದರ್ಶನಗಳು. ವಜ್ರ ಗ್ರಾಫೈಟಾಗಿ ಪರಿವರ್ತನೆ ಹೊಂದುವಾಗ ಅದರ ಒಟ್ಟು ಉಷ್ಣ 450 ಕೆಲೊರಿಗಳಷ್ಟು ಕಡಿಮೆಯಾಗುತ್ತದೆ. ಇದು ಇವುಗಳ ಎಂಥಾಲ್ಪಿಗಳ ವ್ಯತ್ಯಾಸ.
	ವಿಲಯನ ಉಷ್ಣ (ಹೀಟ್ ಆಫ್ ಸೆಲ್ಯೂಷನ್): 1. ಗ್ರಾಂಮೋಲ್ ವಸ್ತು ದ್ರಾವಣವೊಂದರಲ್ಲಿ ವಿಲಯಗೊಳ್ಳುವಾಗ ಹೀರುವ ಇಲ್ಲವೆ ಬಿಡುಗಡೆಗೊಳಿಸುವ ಒಟ್ಟು ಉಷ್ಣಪರಿಮಾಣ. ವಸ್ತುವಿನ ವಿಲೀನತೆಯನ್ನೂ ವಿಲೀನವಸ್ತುವನ್ನೂ ಇದು ಅವಲಂಬಿಸಿದೆ.
	ತಟಸ್ಥೀಕರಣದ ಉಷ್ಣ: 1 ಗ್ರಾಂಮೋಲ್ ಆಮ್ಲ 1 ಗ್ರಾಂಮೋಲ್ ಕ್ಷಾರವನ್ನು ತಟಸ್ಥಗೊಳಿಸುವಾಗ ಬಿಡುಗಡೆಗೊಳಿಸುವ ಉಷ್ಣ. ಉದಾಹರಣೆಗೆ
	ಓಊ4ಔಊ+ಊಅI→ಓಊ4ಅI+ಊ2ಔ+12.3  ಕಿ. ಕೆಲೊರಿ
 (ಯು.ಎಲ್.ಎ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ